'ಲಾಠಿ-ಕಾಟಿ' ಸಮರಕಲೆ ಖ್ಯಾತಿಯ ಅಜ್ಜಿಗೆ ದೆಹಲಿ ಸರ್ಕಾರದಿಂದ ಸನ್ಮಾನ - ಜೀವನೋಪಯಕ್ಕಾಗಿ ಸಮರಕಲೆ ಪ್ರದರ್ಶಿಸಿದ ಅಜ್ಜಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10920232-957-10920232-1615198813061.jpg)
ನವದೆಹಲಿ : ಜೀವನೋಪಾಯಕ್ಕಾಗಿ ಪುಣೆಯ ಬೀದಿಗಳಲ್ಲಿ 'ಲಾಠಿ ಕಾಟಿ' ಎಂಬ ಪ್ರಾಚೀನ ಸಶಸ್ತ್ರ ಸಮರ ಕಲೆ ಪ್ರದರ್ಶಿಸಿ ಗಮನಸೆಳೆದಿದ್ದ ಶಾಂತಾಬಾಯಿ ಪವಾರ್ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳಾ ದಿನಾಚರಣೆ ಪ್ರಯುಕ್ತ ಗೌರವಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪುಣೆಯ ಬೀದಿಗಳಲ್ಲಿ 85 ವರ್ಷದ ಅಜ್ಜಿ ಶಾಂತಾಬಾಯಿ ಅವರು ಪ್ರದರ್ಶಿಸಿದ್ದ 'ಲಾಠಿ ಕಾಟಿ' ಸಮರ ಕಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.