ಗುಂಟೂರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಡಿಗ್ರಿ ವಿದ್ಯಾರ್ಥಿನಿ ಕತ್ತು ಹಿಸುಕಿ ಕೊಲೆ - Degree student murder
🎬 Watch Now: Feature Video
ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ಪೇಟ್ನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯನ್ನು ಬುಧವಾರ ಹತ್ಯೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಮಪ್ಪಲಾ ಮಂಡಲದ ಗೊಲ್ಲಾಪಾಡು ಗ್ರಾಮದ ಮೃತ ಅನುಷಾ, ನರಸರಾವ್ಪೇಟ್ನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಿನುಕೊಂಡದ ಬೊಲ್ಲಪಳ್ಳಿಯ ಆರೋಪಿ ಹರ್ಷವರ್ಧನ್ ರೆಡ್ಡಿ ಕೂಡ ಅದೇ ಕಾಲೇಜಿನಲ್ಲಿ ಓದುತ್ತಿದ್ದ. ಹರ್ಷವರ್ಧನ್ ರೆಡ್ಡಿ ಸಂತ್ರಸ್ತೆಯನ್ನು ತನ್ನ ಬೈಕ್‌ನಲ್ಲಿ ಮಧ್ಯಾಹ್ನ ಡ್ರಾಪ್ ಮಾಡುವ ನೆಪದಲ್ಲಿ ಪಾಲಪಾಡು ರಸ್ತೆಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ನಂತರ ಅನುಷಾಳೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದ ನಡೆಸಿ ಕತ್ತು ಹಿಸುಕಿ ಕೊಂದು ಬಳಿಕ ಆಕೆಯ ದೇಹವನ್ನು ಕಾಲುವೆಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.
Last Updated : Feb 24, 2021, 9:03 PM IST