ರಸ್ತೆ ಮಧ್ಯದಲ್ಲಿ ಬೃಹತ್ ಗಾತ್ರದ ಮೊಸಳೆ ನೋಡಿ ದಂಗಾದ ಜನ! ವಿಡಿಯೋ... - ಸೂರ್ಯಪೇಟ ಮೊ ಸಳೆ
🎬 Watch Now: Feature Video
ತೆಲಂಗಾಣದ ಸೂರ್ಯಪೇಟ ಜಿಲ್ಲೆಯಲ್ಲಿ ಮೊಸಳೆಯೊಂದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಸಮೀಪದ ವಜೀನೆಪಲ್ಲಿ ಗ್ರಾಮದ ಹೊರವಲಯದ ರಸ್ತೆ ಮಧ್ಯದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಆ ರಸ್ತೆ ಮೂಲಕ ತೆರಳುತ್ತಿದ್ದ ಪ್ರಯಾಣಿಕರು ಬೃಹತ್ ಗಾತ್ರದ ಮೊಸಳೆ ಕಂಡು ಭಯಭೀತರಾಗಿದ್ದರು. ಸ್ವಲ್ಪ ಸಮಯದ ಬಳಿಕ ಮೊಸಳೆ ಮತ್ತೆ ನದಿ ಕಡೆ ತೆರಳಿದೆ. ಮೊಸಳೆಯ ಗಾತ್ರವನ್ನು ನೋಡಿದ ಪ್ರಯಾಣಿಕರ ಎದೆ ಒಂದು ಕ್ಷಣ ಝಲ್ ಎಂದಿದೆ. ಮೊಸಳೆ ತೆರಳಿದ ಬಳಿಕ ಪ್ರಯಾಣಿಕರು ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದಾರೆ. ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Last Updated : Aug 17, 2020, 12:56 PM IST