ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಸಳೆ ಕಾಟ, ನೇತಾಡುತ್ತಿದ್ದ ‘ಮಕರ’ನ ಜೊತೆ ಸೆಲ್ಫಿ! ವಿಡಿಯೋ - ನಿಜಾಮಾಬಾದ್ ಮೊಸಳೆ ಸುದ್ದಿ
🎬 Watch Now: Feature Video
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಸಳೆಯೊಂದು ಆತಂಕ ಸೃಷ್ಟಿಸಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ದೂದಿಗಾಂ ಗ್ರಾಮದಲ್ಲಿರುವ ಹಳ್ಳದಿಂದ ಮೊಸಳೆ ರಾಷ್ಟ್ರೀಯ ಹೆದ್ದಾರಿ ಬಳಿ ಬಂದಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮೊಸಳೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಗ್ರಾಮಸ್ಥರು ಪ್ರಾಣಿಯನ್ನು ಜೆಸಿಬಿ ಮೂಲಕ ತಡೆಗೋಡೆಯಿಂದ ಕೆಳಕ್ಕೆ ಬೀಳದಂತೆ ಹಿಡಿದಿದ್ದಾರೆ. ಅರಣ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದ್ರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಮೊಸಳೆಯನ್ನು ಸುರಕ್ಷಿತವಾಗಿ ನದಿಗೆ ಬಿಟ್ಟಿದ್ದಾರೆ. ಇನ್ನು ನೇತಾಡುತ್ತಿದ್ದ ಮೊಸಳೆ ಜೊತೆ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಹಾಗು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಗರಂ ಆಗಿಯೇ ಪ್ರತಿಕ್ರಿಯಿಸುತ್ತಿದ್ದಾರೆ.
Last Updated : Sep 22, 2019, 5:18 PM IST