ಕೊಂಬಿನಿಂದ ತಿವಿದು, ಕಾಲಿಂದ ತುಳಿದು... ಆಟೋ ಡ್ರೈವರ್ ಮೇಲೆ ಸೇಡು ತೀರಿಸಿಕೊಂಡ ಗೋಮಾತೆ!? ವಿಡಿಯೋ... - ರಾಜ್ಕೋಟ್ ಹಸು ದಾಳಿ ಸುದ್ದಿ
🎬 Watch Now: Feature Video
ಗುಜರಾತ್ ರಾಜಕೋಟ್ನಲ್ಲಿ ಆಟೋ ಡ್ರೈವರ್ ಒಬ್ಬನಿಗೆ ಭಯಾನಕ ಅನುಭವವೊಂದು ಆಗಿದೆ. ಆಕಳವೊಂದು ಆಟೋ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿ, ಆಟೋದೊಳಗೆ ತಲೆಯಿಟ್ಟ ಆಕಳು ಚಾಲಕನಿಗೆ ಗುದ್ದಿದೆ. ಆಟೋ ಡ್ರೈವರ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ಹಸುವಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನೋಡಿದ್ರೆ ಆಟೋ ಡ್ರೈವರ್ ಮೇಲೆ ಆಕಳು ಸೇಡು ಇಟ್ಟುಕೊಂಡಿರುವಂತೆ ಕಾಣುತ್ತೆ. ಆಕಳು ದಾಳಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.