ನಾಯಕರು ಬರ್ತಾರೆ ಹೋಗ್ತಾರೆ, ಕಾಂಗ್ರೆಸ್ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಡಿಕೆಶಿ - ಡಿಕೆ ಶಿವಕುಮಾರ್
🎬 Watch Now: Feature Video
ಬೆಂಗಳೂರು: ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಇದೀಗ ಮಧ್ಯಪ್ರದೇಶದಲ್ಲೂ ತನ್ನ ಪ್ಲಾನ್ ಬಹುತೇಕ ಸಕ್ಸಸ್ ಮಾಡಿಕೊಂಡಿದೆ. ಇದೇ ವಿಷಯವಾಗಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಕಾಂಗ್ರೆಸ್ ಪಕ್ಷವನ್ನ ಯಾರೂ ನಾಶ ಮಾಡಲು ಸಾಧ್ಯವಿಲ್ಲ. ನಾಯಕರು ಬರಬಹುದು, ಹೋಗಬಹುದು. ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡಲ್ಲ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಳ್ಳಲು ಬಯಸುವುದಿಲ್ಲ. ಅವರು ಅರ್ಥ ಮಾಡಿಕೊಂಡು ಹಿಂತಿರುಗಿ ಸರ್ಕಾರ ಉಳಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.
Last Updated : Mar 11, 2020, 2:44 PM IST