ನಂದಿಗ್ರಾಮದಲ್ಲಿ ದೀದಿ ಪ್ರಚಾರದ ವೇಳೆ ಮೊಳಗಿತು 'ಜೈ ಶ್ರೀರಾಮ' ಘೋಷಣೆ
🎬 Watch Now: Feature Video
ನಂದಿಗ್ರಾಮ(ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮದಲ್ಲಿ ಏಪ್ರಿಲ್ 1ರಂದು ಚುನಾವಣೆ ನಡೆಯಲಿದೆ. ಮತ ಪ್ರಚಾರದ ಕೊನೆಯ ದಿನವಾದ ಇಂದು ಸಿಎಂ ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಬಲರಾಂಪುರ ಗ್ರಾಮದಲ್ಲಿ ಕೆಲ ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು, ಈ ಸ್ಥಳಕ್ಕೆ ಮಮತಾ ಭೇಟಿ ನೀಡ್ತಿದ್ದ ವೇಳೆ 'ಜೈ ಶ್ರೀರಾಮ' ಘೋಷಣೆ ಮೊಳಗಿದೆ. ಕೈಯಲ್ಲಿ ಬಿಜೆಪಿ ಬಾವುಟ ಹಿಡಿದುಕೊಂಡು ಕೆಲವರು ಘೋಷಣೆ ಕೂಗಿದ್ದಾರೆ. ಟಿಎಂಸಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಮಮತಾ, ಬಿಜೆಪಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಕಾನೂನು ಕೈಗೆತ್ತಿಕೊಂಡಿದ್ದಾರೆ. ತಕ್ಷಣವೇ ರಕ್ಷಣೆ ನೀಡುವಂತೆ ತಾವು ಚುನಾವಣಾ ಆಯೋಗಕ್ಕೆ ಕೋರುವುದಾಗಿ ತಿಳಿಸಿದ್ದಾರೆ.