ಆಟೋ-ಕಾರ್ ಮಧ್ಯೆ ಡಿಕ್ಕಿ, ಎರಡು ಗುಂಪುಗಳ ಮಧ್ಯೆ ಬಿಗ್ ಫೈಟ್..! - ನೋಯ್ಡಾದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ,
🎬 Watch Now: Feature Video
ಆಟೋ ಚಾಲಕ ಮತ್ತು ಕಾರ್ ಮಾಲೀಕ ನಡುವೆ ನಡೆದ ಬಿಗ್ ಫೈಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಕಳೆದ ತಡರಾತ್ರಿ ಕಾರ್ ಮತ್ತು ಆಟೋ ಮಧ್ಯೆ ಸಣ್ಣ ಅಪಘಾತ ಸಂಭವಿಸಿದೆ. ಆಟೋ ಚಾಲಕ ಮತ್ತು ಕಾರ್ ಮಾಲೀಕನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ, ಸ್ಥಳೀಯರು ಕಾರ್ ಮಾಲೀಕನಿಗೆ ಥಳಿಸಿದ್ದಾರೆ. ಬಳಿಕ ಕಾರ್ ಮಾಲೀಕನ ಸಂಬಂಧಿಕರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ, ಎರಡು ಗುಂಪುಗಳ ಮಧ್ಯೆ ಬಿಗ್ ಫೈಟ್ ನಡೆದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.