ವಿಕ್ಟೋರಿಯಾ ಸ್ಮಾರಕದಲ್ಲಿ ‘ಪರಾಕ್ರಮ ದಿನ’ ಆಚರಣೆ: ಪ್ರಧಾನಿ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ - ಪ್ರಧಾನಿ ನರೇಂದ್ರ ಮೋದಿ
🎬 Watch Now: Feature Video
ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ನಿಮಿತ್ತ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ವಿಕ್ಟೋರಿಯಾ ಸ್ಮಾರಕದಲ್ಲಿ ‘ಪರಾಕ್ರಮ ದಿನ’ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಅವರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ರವೀಂದ್ರನಾಥ ಠಾಗೋರ್ ಅವರ ಗೀತೆಗೆ ಗಾಯಕಿ ಉಷಾ ಉತ್ತಪ್ಪ ದನಿಯಾದರು. ಮ್ಯೂಸಿಕ್ ಬ್ಯಾಂಡ್ ಜೊತೆ ಮಕ್ಕಳು ಗಾಯನ ಪ್ರದರ್ಶನ ನೀಡಿದರು.