ಬೈಕ್ಗೆ ಡಿಕ್ಕಿ ಹೊಡೆದು, ಸವಾರನನ್ನು ರಸ್ತೆಯಲ್ಲೇ ಎಳೆದುಕೊಂಡು ಹೋದ ಕಾರು! ವಿಡಿಯೋ - ಛತ್ತೀಸ್ಗಢ ಸುದ್ದಿ
🎬 Watch Now: Feature Video

ರಾಯ್ಪುರ: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಬೈಕ್ ಸವಾರರಿಬ್ಬರೂ ಗಾಯಗೊಂಡಿರುವ ಘಟನೆ ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದಿದೆ. ಬೈಕ್ಗೆ ಡಿಕ್ಕಿ ಹೊಡೆದ ಕಾರಿನ ಮುಂದಿನ ಚಕ್ರಗಳ ಬಳಿ ಬಿದ್ದ ಹಿಂಬದಿ ಸವಾರನನ್ನು, ಕಾರು ರಸ್ತೆಯಲ್ಲೇ ಎಳೆದುಕೊಂಡು ಹೋಗಿದೆ. ಹೀಗಾಗಿ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಬೈಕ್ ರೈಡ್ ಮಾಡುತ್ತಿದ್ದಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೆ ಕಾರಣನಾದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated : Dec 15, 2019, 9:09 AM IST