ಹೀಗೂ ಉಂಟೆ... ಕಾರ್ ಡ್ರೈವರ್ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಹಾಕಿದ ಪೊಲೀಸ್ರು! - ಟ್ರಾಫಿಕ್ ಪೊಲೀಸ್ ಎಡವಟ್ಟು
🎬 Watch Now: Feature Video

ಸಂಬಲ್ಪುರ್(ಒಡಿಶಾ): ಹೆಲ್ಮೆಟ್ ಹಾಕಿಕೊಳ್ಳದೇ ಕಾರ್ ಡ್ರೈವ್ ಮಾಡಿದ್ದಾರೆಂದು ಸಂಚಾರಿ ಪೊಲೀಸ್ ಚಾಲಕನಿಗೆ ದಂಡ ಹಾಕಿರುವ ಘಟನೆ ಒಡಿಶಾದ ಸಂಬಲ್ಪುರ್ದಲ್ಲಿ ನಡೆದಿದೆ. ಕಾರ್ ಡ್ರೈವರ್ ಚಂದ್ರ ಕುಮಾರ್ಗೆ ಅಲ್ಲಿನ ಟ್ರಾಫಿಕ್ ಪೊಲೀಸ್ ಸಾವಿರ ರೂ. ದಂಡದ ರಶೀದಿ ನೀಡಿದ್ದು, ಅದರಲ್ಲಿ ಹೆಲ್ಮೆಟ್ ಹಾಕಿಕೊಳ್ಳದೇ ಡ್ರೈವಿಂಗ್ ಮಾಡ್ತಿದ್ದ ಕಾರಣ ದಂಡ ಹಾಕಲಾಗಿದೆ ಎಂದು ಮುದ್ರಿಸಲಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಚಂದ್ರಕುಮಾರ್ ಸಂಬಲ್ಪುರ್ ಆರ್ಟಿಒ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ.