ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಕಾರು-ಟ್ರಕ್: ಚಾಲಕ ಸಜೀವ ದಹನ! - ಕಾರು ಮತ್ತು ಟ್ರಕ್ ನಡುವೆ ಅಪಘಾತ
🎬 Watch Now: Feature Video

ಗಾಜಿಯಾಬಾದ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 9ರ ಸಮೀಪ ಕಾರು ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು ಡಿಕ್ಕಿ ರಭಸಕ್ಕೆ ಎರಡೂ ವಾಹನಗಳು ಸುಟ್ಟು ಭಸ್ಮಗೊಂಡಿವೆ. ಬೆಂಕಿಯ ಕೆನ್ನಾಲಗೆಗೆ ಕಾರು ಚಾಲಕ ಮೃತಪಟ್ಟಿದ್ದು ಆತನ ಗುರುತು ಪತ್ತೆಯಾಗಿಲ್ಲ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿದ್ದು ಟ್ರಕ್ ಚಾಲಕ ಅತಿಯಾದ ವೇಗವೇ ಈ ಅಪಘಾತದಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.