ಬದಕಲು ನೆರವು ನೀಡಿ, ಇಲ್ಲವೇ ಸಾಯಲು ಅನುಮತಿಸಿ!! - ಬೋಲಂಗೀರ್ ಸುದ್ದಿ
🎬 Watch Now: Feature Video

ಕ್ಯಾನ್ಸರ್ ಗಡ್ಡೆ ಆತನ ಅರ್ಧ ಮುಖವನ್ನೇ ವಿಕಾರಗೊಳಿಸಿದೆ. ಮೊಗದ ಅರ್ಧದಷ್ಟು ಆವರಿಸಿರುವ ಕ್ಯಾನ್ಸರ್ ಗಡ್ಡೆ ಆತನಿಗೆ ಬದುಕಲು ಬಿಡುತ್ತಿಲ್ಲ. ಹೀಗಾಗಿ ಆತ ಸಾಯಲು ದಯಾಮರಣ ಕೋರಿದ್ದಾನೆ. ಒಡಿಶಾದ ಬೋಲಂಗೀರ್ ಜಿಲ್ಲೆಯ ಮನಬೋಧಾನಿಗೆ 8ನೇ ತರಗತಿಯಲ್ಲೇ ಈ ಕ್ಯಾನ್ಸರ್ ಗಡ್ಡೆ ಬೆಳೆದಿತ್ತು. 2009ರಲ್ಲಿ ಆತ ಕಟಕ್ನಲ್ಲಿ ಆಪರೇಷನ್ ಮಾಡಿಸಿಕೊಂಡಿದ್ರೂ ಪ್ರಯೋಜನವಾಗಲಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆ ಗಡ್ಡೆ ಆತನ ಆಕಾರವನ್ನೇ ವಿಕಾರಗೊಳಿಸಿದೆ. ಈ ಗಡ್ಡೆ ತೆಗೆಸಲು ನವದೆಹಲಿಯ ಏಮ್ಸ್ನಲ್ಲಿ ಆಪರೇಷನ್ ಮಾಡಿಸಬೇಕಾಗಿದ್ದು, ಒಡಿಶಾ ಲೋಕಸಭಾ ಭವನಕ್ಕೆ ತೆರಳಿದ್ದರೂ ಪ್ರಯೋಜನವಾಗಲಿಲ್ಲ. ಎನ್ಜಿಒ ಮೂಲಕ ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ರೂ ಉಪಯೋಗವಾಗಲಿಲ್ಲ. ಹೀಗಾಗಿ ಆತ ನನಗೆ ಬದುಕಲು ನೆರವು ನೀಡಿ, ಇಲ್ಲವೇ ಸಾಯಲು ಅನುಮತಿಸಿ ಎಂದು ದಯಾಮರಣ ಕೋರಿದ್ದಾನೆ.