'ನೇತಾಜಿಯನ್ನ ಕೊಂದಿದ್ದು ಕಾಂಗ್ರೆಸ್': ಮತ್ತೊಂದು ಕಿಡಿ ಹೊತ್ತಿಸಿದ ಸಾಕ್ಷಿ ಮಹಾರಾಜ್! - ನೇತಾಜಿಯನ್ನ ಕೊಂದಿದ್ದು ಕಾಂಗ್ರೆಸ್ ಎಂದ ಸಾಕ್ಷಿ ಮಹಾರಾಜ್
🎬 Watch Now: Feature Video

ಉನ್ನಾವೋ (ಉತ್ತರ ಪ್ರದೇಶ): ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನ ಸಮಯದ ಮುನ್ನವೇ ಸಾವಿನ ಸುಳಿಯಲ್ಲಿ ಕಾಂಗ್ರೆಸ್ ಸಿಲುಕಿಸಿತ್ತು. ಮಹಾತ್ಮ ಗಾಂಧೀಜಿ ಹಾಗೂ ಪಂಡಿತ್ ಜವಹರಲಾಲ್ ನೆಹರೂ ಮುಂದೆ ಸುಭಾಷ್ ಚಂದ್ರ ಬೋಸ್ ಜನಪ್ರಿಯತೆ ಹೆಚ್ಚಾಗುವುದನ್ನ ತಡೆಯಲು ಕಾಂಗ್ರೆಸ್ ನೇತಾಜಿಯನ್ನ ಕೊಲೆ ಮಾಡಿತು ಎಂದು ಉತ್ತರ ಪ್ರದೇಶದ ಉನ್ನಾವೋನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಂಭೀರ ಆರೋಪ ಮಾಡಿದ್ದಾರೆ.