Y+ ಭದ್ರತೆಯೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಮಿಥುನ್ ಚಕ್ರವರ್ತಿ

By

Published : Apr 29, 2021, 9:19 AM IST

thumbnail

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಎಂಟನೇ ಹಾಗೂ ಅಂತಿಮ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ವೇಳೆ ಬಿಜೆಪಿ ನಾಯಕ, ಬಾಲಿವುಡ್​ ನಟ ಮಿಥುನ್ ಚಕ್ರವರ್ತಿ ಉತ್ತರ ಕೋಲ್ಕತ್ತಾದ ಕಾಶಿಪುರ-ಬೆಲ್ಗಾಚಿಯಾದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. Y+ ಭದ್ರತೆಯೊಂದಿಗೆ ಬಂದು ವೋಟ್​ ಮಾಡಿದ ನಟ, ಇಷ್ಟು ಶಾಂತಿಯುತವಾಗಿ ಇದೇ ಮೊದಲು ಮತದಾನ ಮಾಡಿರುವೆ ಎಂದು ಹೇಳಿ ಭದ್ರತಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮಿಥುನ್ ಚಕ್ರವರ್ತಿ ಅವರು ಮಾರ್ಚ್​ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.