ಎಮ್ಐಎಮ್ಗೆ ಬಿಜೆಪಿ ಪೈಪೋಟಿಯೇ ಅಲ್ಲ: ಅಸಾದುದ್ದೀನ್ ಓವೈಸಿ - ಹೈದ್ರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ ಫಲಿತಾಂಶ ಕುರಿತು ಓವೈಸಿ ಹೇಳಿಕೆ
🎬 Watch Now: Feature Video
ಹೈದ್ರಾಬಾದ್: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿನ ಬಿಜೆಪಿ ಗೆಲುವು ಕೇವಲ ಕ್ಷಣಿಕ, ಎಮ್ಐಎಮ್ಗೆ ಬಿಜೆಪಿ ದೊಡ್ಡ ಪೈಪೋಟಿ ಅಲ್ಲ ಎಂದು ಎಮ್ಐಎಮ್ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಜಿಹೆಚ್ಎಮ್ಸಿ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು ಜನರ ನಿರ್ಧಾರವನ್ನು ಗೌರವಯುತವಾಗಿ ಸ್ವೀಕರಿಸುತ್ತೇವೆ ಎಂದರು. ಯುಪಿ ಸಿಎಂ ಯೋಗಿ ಅದಿತ್ಯನಾಥ್ ರೋಡ್ ಶೋ ನಡೆಸಿದ ಯಾವ ವಾರ್ಡ್ನಲ್ಲಿಯೂ ಕೂಡಾ ಬಿಜೆಪಿ ಗೆಲುವು ಸಾಧಿಸಿಲ್ಲ. ಬಿಜೆಪಿ ಗೆಲುವು ಕೇವಲ ಕ್ಷಣಿಕ ಎಂದರು. ಅಲ್ಲದೇ ಟಿಆರ್ಎಸ್ ತೆಲಂಗಾಣದಲ್ಲಿ ಅಸಾಧಾರಣ ಶಕ್ತಿಯಾಗಿದ್ದು, ಚುನಾವಣೆಯಲ್ಲಿ ಸೋತ ವಾರ್ಡ್‌ಗಳ ಬಗ್ಗೆ ಮರು ಯೋಚಿಸಬೇಕು ಎಂದೂ ಸಲಹೆ ನೀಡಿದ್ದಾರೆ.
TAGGED:
ghmc election results