ಟಿಆರ್ಎಸ್ ಶಾಸಕ ಧರ್ಮಾರೆಡ್ಡಿ ನಿವಾಸದ ಮೇಲೆ ದಾಳಿ ಆರೋಪ.. 53 ಬಿಜೆಪಿ ಕಾರ್ಯಕರ್ತರ ಬಂಧನ - ಟಿಆರ್ಎಸ್ ಶಾಸಕ ಧರ್ಮಾರೆಡ್ಡಿ ನಿವಾಸದ ಮೇಲೆ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10454514-thumbnail-3x2-attac.jpg)
ಹೈದರಾಬಾದ್: ತೆಲಂಗಾಣದಲ್ಲಿ ಟಿಆರ್ಎಸ್ ಹಾಗೂ ಬಿಜೆಪಿ ನಡುವಿನ ಸಮರ ಮುಂದುವರಿದಿದೆ. ಟಿಆರ್ಎಸ್ ಶಾಸಕ ಧರ್ಮಾರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ ಆರೋಪದಡಿ 53 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ್ ಜನ್ಮ ಭೂಮಿ ಟ್ರಸ್ಟ್ ಸಂಗ್ರಹಿಸಿದ ದೇಣಿಗೆ ವಿರುದ್ಧ ಶಾಸಕ ಧರ್ಮಾರೆಡ್ಡಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವ ವೇಳೆ, ಕಲ್ಲು, ಮೊಟ್ಟೆ ಎಸೆದರು ಎನ್ನಲಾಗ್ತಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.