ಒಂದೂವರೆ ವರ್ಷದಿಂದ ಬಾಂಗ್ಲಾದೇಶ ಭಯೋತ್ಪಾದಕರ ಕಣ್ಣು ನನ್ನ ಮೇಲಿದೆ: ಕೈಲಾಶ್ ವಿಜಯ್ ವರ್ಗಿಯಾ - Bangladesh terrorists watching vijayavargi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5817267-thumbnail-3x2-klb.jpg)
ಇಂದೋರ್ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಇಂದೋರ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಮಾತನಾಡುತ್ತಾ, ನಮ್ಮ ಮನೆ ನಿರ್ಮಾಣ ಕಾರ್ಯದಲ್ಲಿ ಬಾಂಗ್ಲಾ ವಲಸಿಗರು ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಶುರು ಆಗಿತ್ತು. ಆದ್ದರಿಂದ ಕೆಲಸವನ್ನು ನಿಲ್ಲಿಸಿದ್ದೆ. ಕೆಲಸ ನಿಲ್ಲಿಸಿದ ಎರಡೇ ದಿನದಲ್ಲಿ ನನಗೆ ಬೆದರಿಕೆ ಹಾಕಿದರು, ಆದರೂ ನಾನು ಪೊಲೀಸರಿಗೆ ಯಾವುದೇ ದೂರು ನೀಡದೆ, ಕೇವಲ ವಾರ್ನಿಂಗ್ ನೀಡಲು ಸೂಚಿಸಿದೆ. ಸತತ ಒಂದೂವರೆ ವರ್ಷಗಳಿಂದ ಬಾಂಗ್ಲಾದೇಶ ಭಯೋತ್ಪಾದಕರ ಕಣ್ಣು ನನ್ನ ಮೇಲೆ ಇದೆ. ಆದ್ದರಿಂದ ಸಿಐಎಸ್ಎಫ್‌ನ ಆರು ಸಶಸ್ತ್ರ ಬೆಟಾಲಿಯನ್‌ನ ಭದ್ರತಾ ದಳದವರು ನನ್ನೊಂದಿಗೆ ಸದಾ ಇರುತ್ತಾರೆ ಎಂದು ತಿಳಿಸಿದರು.