ರಿಯಾಗೆ ಜಾಮೀನು ಸಿಕ್ಕಿರುವುದು ದೊಡ್ಡ ವಿಷಯವಲ್ಲ: ವಕೀಲ ವಿಕಾಸ್ ಸಿಂಗ್ - ಜೈಲಿನಿಂದ ರಿಯಾ ಬಿಡುಗಡೆ
🎬 Watch Now: Feature Video
ಮುಂಬೈ: ಬಾಲಿವುಡ್ ನಟ ಸುಶಾಂಗ್ ರಜಪೂತ್ ಆತ್ಮಹತ್ಯೆ ಹಾಗೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಿಂದ ನಟಿ ರಿಯಾ ಚಕ್ರವರ್ತಿ ರಿಲೀಸ್ ಆಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಜಪೂತ್ ತಂದೆ ಪರ ವಕೀಲ ವಿಕಾಸ್ ಸಿಂಗ್ ಮಾತನಾಡಿದ್ದು, ರಿಯಾಗೆ ಜಾಮೀನು ಸಿಕ್ಕಿರುವುದು ದೊಡ್ಡ ವಿಷಯವೇ ಅಲ್ಲ. ಅವರಿಗೆ ಜಾಮೀನು ಸಿಕ್ಕಿರುವುದು ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದಿದ್ದು, ನಿಜವಾದ ಪ್ರಶ್ನೆಯೆಂದರೆ ಸುಶಾಂತ್ಗೆ ತಿಳಿಯದ ರೀತಿಯಲ್ಲಿ ಡ್ರಗ್ಸ್ ನೀಡಿರುವುದು ಎಂದಿದ್ದಾರೆ. ಇದರ ಬಗ್ಗೆ ಅವಳು ವೈದ್ಯರ ಮುಂದೆ ಏನು ಹೇಳಿದ್ದಾಳೆ. ಯಾರನ್ನು ಚಿಕಿತ್ಸೆಗಾಗಿ ಕರೆದೊಯ್ದಿದ್ದಳು ಎಂದು ಪ್ರಶ್ನಿಸಿದ್ದಾರೆ.