ಕೊನೆಗೂ ಈ ರಾಜ್ಯದಲ್ಲಿ ತಗ್ಗಿತು ಪ್ರವಾಹ: ದೀರ್ಘ ನಿಟ್ಟುಸಿರು ಬಿಟ್ಟ ಜನ
🎬 Watch Now: Feature Video
ಗುವಾಹಟಿ ( ಅಸ್ಸೋಂ): ಇಲ್ಲಿನ 26 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ನಲುಗಿದ್ದವು. ಅವುಗಳ ಸಂಖ್ಯೆ ಈಗ ನಾಲ್ಕಕ್ಕೆ ಇಳಿಕೆ ಕಂಡಿದೆ. 26 ಲಕ್ಷ ಜನರು ಭಾರಿ ಮಳೆಗೆ ಸಂಕಷ್ಟ ಅನುಭವಿಸಿದ್ದರು. ಈ ಆ ಪ್ರಮಾಣ 8,456 ಕ್ಕೆ ಇಳಿದಿದೆ. ಆದರೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹದ ಅಬ್ಬರ ಜೋರಾಗಿಯೇ ಇದೆ. ಇನ್ನೂ ಧೆಮಾಜಿ, ಲಖಿಂಪುರ್, ಬಕ್ಸಾ, ಮೊರಿಗಾಂವ್ ಜಿಲ್ಲೆಯ 76 ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಜೋರ್ಹತ್ ಜಿಲ್ಲೆಯ ನಿಮತಿಗಹತ್‌ನಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ.