ಭಾರೀ ಹಿಮದ ನಡುವೆ ಮಹಿಳೆ,ನವಜಾತ ಶಿಶು ಹೊತ್ತು 6 ಕಿಮೀ ಸಾಗಿದ ಯೋಧರು: ಹೃದಯಸ್ಪರ್ಶಿ ವಿಡಿಯೋ! - ಕುಪ್ವಾರದಲ್ಲಿ ಮಹಿಳೆ ಹೊತ್ತು ಸಾಗಿದ ಸೇನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10356934-1110-10356934-1611421872759.jpg)
ಕುಪ್ವಾರ(ಜಮ್ಮು-ಕಾಶ್ಮೀರ): ಭಾರೀ ಹಿಮಪಾತದ ನಡುವೆ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಹಾಗೂ ನವಜಾತು ಶಿಶುವನ್ನ ಹೊತ್ತು ಸಾಗಿರುವ ಯೋಧರು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಆಸ್ಪತ್ರೆಯಿಂದ ಬರೋಬ್ಬರಿ 6 ಕಿಲೋ ಮೀಟರ್ ದೂರ ಹೊತ್ತು ಸಾಗಿರುವ ಭಾರತೀಯ ಸೇನೆ ತಾಯಿ ಹಾಗೂ ಮಗುವನ್ನ ಸುರಕ್ಷಿತವಾಗಿ ಮನೆಗೆ ತಲುಪಿಸಿದೆ. ಮುದ್ದಾದ ಮಗುವಿಗೆ ಮಹಿಳೆಯೋರ್ವರು ನಿನ್ನೆ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ ಹೆಚ್ಚು ಹಿಮಪಾತವಾಗುತ್ತಿರುವ ಕಾರಣ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಯೋಧರು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ.