ಕೊಚ್ಚಿಯಲ್ಲಿ ಸ್ಫೋಟಕ ಬಳಸಿ 19 ಮಹಡಿಗಳ ಕಟ್ಟಡ ನೆಲಸಮ, ವಿಡಿಯೋ ನೋಡಿ! - ಕೊಚ್ಚಿ ಕಟ್ಟಡ ನೆಲಸಮ ವಿಡಿಯೋ
🎬 Watch Now: Feature Video
ಕೊಚ್ಚಿ(ಕೇರಳ): ಅನುಮತಿ ಪಡೆಯದೇ ಅನಧಿಕೃತವಾಗಿ ಕೊಚ್ಚಿಯ ಮರಾಡು ಎಂಬಲ್ಲಿ ನಿರ್ಮಿಸಿದ್ದ H2o ಹೋಲಿ ಫೇತ್ ಹೆಸರಿನ ಅಪಾರ್ಟ್ಮೆಂಟ್ಅನ್ನು ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಕರಾವಳಿ ನಿಯಂತ್ರಣ ವಲಯದ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಕಟ್ಟಡ ಕೆಡವಲು ಆದೇಶಿಸಿತ್ತು. ಹೀಗಾಗಿ 19 ಮಹಡಿಗಳ ಕಟ್ಟಡವನ್ನು ಸುಮಾರು 800 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸ್ಫೋಟಿಸಿ ಕಟ್ಟಡ ಕೆಡವಲಾಗಿದ್ದು, ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
Last Updated : Jan 11, 2020, 12:34 PM IST