ಎಐಎಡಿಎಂಕೆ ಮುಖಂಡನಿಂದ ಮಹಿಳೆಯರಿಗೆ ಹಣ ಹಂಚಿಕೆ.. ವಿಡಿಯೋ ವೈರಲ್ - ಎಂ.ಕೆ.ಸ್ಟಾಲಿನ್
🎬 Watch Now: Feature Video
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದ್ದು, ಎಲ್ಲಾ ಪಕ್ಷಗಳು ಗೆಲುವಿಗಾಗಿ ತಮ್ಮದೇ ರೀತಿ ತಯಾರಿ ನಡೆಸಿವೆ. ಆದರೆ ಎಐಎಡಿಎಂಕೆ ಅಲ್ಪಸಂಖ್ಯಾತ ವಿಭಾಗದ ಮುಖಂಡ ಜೆ.ಎಂ. ಬಶೀರ್ ಎಂಬುವವರು ಮತದಾರರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಚೆಪಾಕ್ ಬ್ಲಾಕ್‌ನಲ್ಲಿರುವ ಮನೆಯಲ್ಲಿ ಎಐಎಡಿಎಂಕೆ ಮುಖಂಡ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಮಹಿಳೆಯರಿಗೆ 500 ರೂ. ಹಣ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಚೆನ್ನೈನ ಚೆಪಾಕ್- ತಿರುವಳ್ಳಿಕೆಣಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.