ಮೃತ ಮರಿ ಬಿಡದ ಅಮ್ಮ... ಮಣ್ಣು ಮುಚ್ಚಿ ಶವಸಂಸ್ಕಾರ ಮಾಡಿದ ತಾಯಿ ಶ್ವಾನ! - street dog puppy died in east godavari,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5522720-225-5522720-1577541319558.jpg)
ಅಲ್ಲಿ ತಾಯಿಯ ಮಮತೆ ಅಸಹಾಯಕತೆ ಕಂಡಿತು. ತನ್ನ ಪ್ರೀತಿಯ ಮರಿಯನ್ನು ಕಳೆದುಕೊಂಡ ತಾಯಿಯ ರೋದನೆ ಎಲ್ಲರ ಮನ ಕಲುಕಿತು. ರಸ್ತೆದಾಟುತ್ತಿದ್ದ ನಾಯಿಯ ಮರಿಯ ಮೇಲೆ ಆಟೋವೊಂದು ಹರಿದಿತ್ತು. ಅಪಘಾತದಲ್ಲಿ ತನ್ನ ಮರಿಯನ್ನು ಕಳೆದುಕೊಂಡ ನಾಯಿಯೊಂದು ರೋದಿಸುತ್ತಿದ್ದ ದೃಶ್ಯ ಎಲ್ಲರ ಮನಕಲುಕಿತು. ಮೃತ ಮರಿಯ ದೇಹದ ಮೇಲೆ ತನ್ನ ಮುಖದಿಂದ ಮಣ್ಣು ಹಾಕಿ ಶವಸಂಸ್ಕಾರ ಮಾಡಿತು ಆ ತಾಯಿ ಶ್ವಾನ. ಶ್ವಾನ ಸ್ಥಿತಿ ನೋಡಿದ ಜನರ ಕಣ್ಣಾಲಿಗಳು ನೀರಾದವು. ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಕೊತ್ತಪಲ್ಲಿಯಲ್ಲಿ ಈ ದೃಶ್ಯ ಕಂಡುಬಂತು.