ವನ್ಯಜೀವಿ ಪ್ರಿಯನ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಅದ್ಭುತ ಚಿತ್ರಗಳಿವು! ನೀವೂ ಒಮ್ಮೆ ಕಣ್ತುಂಬಿಕೊಳ್ಳಿ - ಸೇಂಥಿಲ್ ಕುಮಾರನ್
🎬 Watch Now: Feature Video
ವೃತ್ತಿಯಲ್ಲಿ ಸಣ್ಣಮಟ್ಟದ ಕೈಗಾರಿಕೆ ನಡೆಸುತ್ತಿರುವ ಓರ್ವ ಉದ್ಯಮಿ ಇವರು. ಆದರೆ ಇವರಿಗೆ ಇರುವ ಪರಿಸರ ಪ್ರೇಮ ಅಪಾರವಾದದ್ದು. ಸೇಂಥಿಲ್ ಕುಮಾರನ್ ಒಮ್ಮೆ ಕಬಿನಿ ಭಾಗದ ಅರಣ್ಯಕ್ಕೆ ತೆರಳಿದಾಗ ಕಾಡು ನಾಯಿಯೊಂದು ಬಲೆಗೆ ಸಿಕ್ಕಿ ಒದ್ದಾಡುತ್ತಿತ್ತಂತೆ. ಇದನ್ನು ಗಮನಿಸಿದ ಸೇಂಥಿಲ್ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪ್ರಾಣಿಯನ್ನು ರಕ್ಷಿಸಿದ್ದರಂತೆ. ಸೇಂಥಿಲ್ಗೆ ಅಂದಿನಿಂದ ವನ್ಯಜೀವಿಗಳ ಮೇಲೆ ಉಂಟಾದ ಒಲವು ಇಂದಿಗೂ ಕಡಿಮೆಯಾಗಿಲ್ಲ. ಕಾಡು ಸುತ್ತುವುದು, ವನ್ಯಜೀವಿಗಳ ಫೋಟೋ ಸೆರೆ ಹಿಡಿಯುವುದು ಹಾಗೂ ಅವುಗಳ ಬಗ್ಗೆ ತಿಳಿದುಕೊಂಡು ಇತರರಿಗೂ ಪ್ರಾಣಿಗಳ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ತಮಿಳುನಾಡಿನ ಸೇಂಥಿಲ್ ಕುಮಾರನ್ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿನ ಅರಣ್ಯಗಳಿಗೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣ ಮಾಡುವುದರೊಂದಿಗೆ ಸಂತಸ ಕಾಣುತ್ತಿದ್ದಾರೆ. ಸೇಂಥಿಲ್ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕ ಕೆಲವು ಫೋಟೋಗಳು ಇಲ್ಲಿವೆ ನೋಡಿ.