ಅಸ್ಸೋಂ ಪ್ರವಾಹಕ್ಕೆ 87 ಜನರ ಬಲಿ: ಸಂಕಷ್ಟಕ್ಕೆ ಸಿಲುಕಿದ 24ಲಕ್ಷ ಮಂದಿ - ಅಸ್ಸೋಂ ಪ್ರವಾಹದಲ್ಲಿ ಹಲವು ಜನರ ಸಾವು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8122358-thumbnail-3x2-hrs.jpg)
ಗುವಾಹಟಿ(ಅಸ್ಸೋಂ) : ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆ ರಾಜ್ಯದ 24 ಜಿಲ್ಲೆಗಳ 2,323 ಗ್ರಾಮಗಳು ಜಲಾವೃತಗೊಂಡಿವೆ. ಒಟ್ಟು 110,323,54 ಹೆಕ್ಟೇರ್ ಪ್ರದೇಶಕ್ಕೆ ನೀರು ನುಗ್ಗಿದ್ದು, 24,19,185 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 379 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇದುವರೆಗೆ 87 ಜನ ಪ್ರವಾಹಕ್ಕೆ ಬಲಿಯಾಗಿದ್ದಾರೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ( ಎಎಸ್ಡಿಎಂಎ) ತಿಳಿಸಿದೆ.