ಮೆರವಣಿಗೆ ಮೇಲೆ ಹರಿದ ಟ್ರ್ಯಾಕ್ಟರ್: 6 ಮಂದಿ ದಾರುಣ ಸಾವು - ಮೆರವಣಿಗೆ ಮೇಲೆ ಹರಿದ ಟ್ರ್ಯಾಕ್ಟರ್
🎬 Watch Now: Feature Video
ಬಿಕಾನೆರ್ (ರಾಜಸ್ಥಾನ): ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ವೊಂದು ಮೆರವಣಿಗೆ ನಡೆಸುತ್ತಿದ್ದ ಜನರ ಮೇಲೆ ಹರಿದು 6 ಮಂದಿ ಸಾವಿಗೀಡಾದ ಘಟನೆ ರಾಜಸ್ಥಾನದ ಬಿಕಾನೆರ್ ನಗರದಲ್ಲಿ ಸಂಭವಿಸಿದೆ. ಜಲ್ಲಿ ತುಂಬಿದ್ದ ಟ್ರ್ಯಾಕ್ಟರ್ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಹರಿದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಯಶಹರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರ್ಯಾಕ್ಟರ್ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.