ಫಾಸ್ಟ್ ಟ್ಯಾಗ್ ಉದ್ದೇಶ, ದೇಶದಲ್ಲಿ ನಕಲಿ ಲೈಸನ್ಸ್ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದೇನು? - ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ,
🎬 Watch Now: Feature Video
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ದೇಶದ ಬಹುತೇಕ ಚಾಲಕರಿಗೆ ನಕಲಿ ಪರವಾನಗಿ ಇದೆ ಎಂದು ಹೇಳಿದರು. ದೇಶದಲ್ಲಿ ಶೇ.30ರಷ್ಟು ಚಾಲಕರಲ್ಲಿ ನಕಲಿ ಲೈಸನ್ಸ್ ಇವೆ. ನಕಲಿ ಪರವಾನಗಿಯನ್ನು ತಯಾರಿಸುವುದು ತುಂಬಾ ಸುಲಭವಾಗಿದೆ. ಹಣವನ್ನು ಪಾವತಿಸುವ ಮೂಲಕ ಯಾರಾದರೂ ಆರ್‌ಟಿಒ ಕಚೇರಿಯಿಂದ ಚಾಲನಾ ಲೈಸನ್ಸ್ ಪಡೆಯಬಹುದಾಗಿದೆ. ಆದರೆ ನಕಲಿ ಪರವಾನಗಿ ಮಾಡುವುದನ್ನು ನಿಲ್ಲಿಸಲು ಫಾಸ್ಟ್‌ಟ್ಯಾಗ್ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಫಾಸ್ಟ್‌ಟ್ಯಾಗ್ ನೋಂದಣಿ ದಿನಾಂಕದ ಮಿತಿಯನ್ನು ಈ ಮೊದಲು ಎರಡು-ಮೂರು ಬಾರಿ ಸರ್ಕಾರ ವಿಸ್ತರಿಸಿದೆ. ಈಗ ಅದನ್ನು ಇನ್ನಷ್ಟು ವಿಸ್ತರಿಸಲಾಗುವುದಿಲ್ಲ. ಎಲ್ಲರೂ ಕೂಡಲೇ ಫಾಸ್ಟ್‌ಟ್ಯಾಗ್ ನೋಂದಣಿ ಮಾಡಿಕೊಳ್ಳಬೇಕೆಂದು ಗಡ್ಕರಿ ಹೇಳಿದರು.