ಸ್ಕೇಟಿಂಗ್ ಶೂ ಧರಿಸಿ ಭಾಂಗ್ರಾ ನೃತ್ಯ ಮಾಡುತ್ತಿರುವ ಬಾಲಕಿ!: ವಿಡಿಯೋ - chandigarh skating
🎬 Watch Now: Feature Video

ಪಂಜಾಬ್: ಇಲ್ಲಿನ 12 ವರ್ಷದ ಬಾಲಕಿ ಜಾನ್ವಿ ಸ್ಕೇಟಿಂಗ್ ಶೂ ಧರಿಸಿ ಸರಾಗವಾಗಿ ಭಾಂಗ್ರಾ ನೃತ್ಯ ಮಾಡುತ್ತಿದ್ದಾಳೆ. ಇದರ ಜೊತೆಗೆ ಸ್ಕೇಟಿಂಗ್ ಶೂ ಧರಿಸಿ ಮೆಟ್ಟಿಲುಗಳಿಂದ ಇಳಿಯುವ ಸಾಹಸ ಮಾಡುತ್ತಿದ್ದಾಳೆ. ತನ್ನ ತಂದೆ-ತಾಯಿಯೊಂದಿಗೆ ಡೆಕತ್ಲಾನ್ಗೆ ಹೋಗಿದ್ದ ಜಾನ್ವಿ ಸ್ಕೇಟ್‌ಗಳನ್ನು ಖರೀದಿಸಿದ್ದಳು. ಆದರೆ ಸ್ಕೇಟಿಂಗ್ ಕಲಿಸಲು ಕೋಚ್ ಸಿಗದ ಕಾರಣ ಜಾನ್ವಿಯ ತಂದೆ ಮನೀಶ್ ಜಿಂದಾಲ್ ಅವರು ಯೂಟ್ಯೂಬ್ ನೋಡಿ ಮಗಳಿಗೆ ಸ್ಕೇಟಿಂಗ್ ತರಬೇತಿ ನೀಡಿದ್ದಾರೆ. ಇದೀಗ ಜಾನ್ವಿ ಸ್ಕೇಟಿಂಗ್ನಲ್ಲಿ ಪರಿಣಿತಿ ಪಡೆದಿದ್ದು, ಆಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿದ್ದಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.