ಹೈವೇಯಲ್ಲಿ ಕಾರಿನ ಟಾಪ್ ಮೇಲೆ ನಿಂತು ಡ್ಯಾನ್ಸ್ ಮಾಡುತ್ತ ಹುಚ್ಚಾಟ.. ವಿಡಿಯೋ ವೈರಲ್ - ಹೆದ್ಧಾರಿಯಲ್ಲೇ ಕಾರಿನ ಮೇಲೆ ಹತ್ತಿಕೊಂಡು ಯುವಕರ ನೃತ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14911646-thumbnail-3x2-newss.jpg)
ಗಾಜಿಯಾಬಾದ್: ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಡ್ಯಾನ್ಸ್, ಸ್ಟಂಟ್ಸ್ ಮಾಡುತ್ತ ವಿಡಿಯೋ ಮಾಡುವುದು ಸಾಮಾನ್ಯವಾದಂತಿದೆ. ಇಂತದ್ದೇ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಯುವಕರ ಗುಂಪೊಂದು ಕಾರಿನ ಟಾಪ್ ಮೇಲೆ ನಿಂತುಕೊಂಡು ಡ್ಯಾನ್ಸ್ ಮಾಡುತ್ತ ಗಲಾಟೆ ಸೃಷ್ಟಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ತುಂಬಾ ಜನದಟ್ಟಣೆ ಇದ್ದರೂ ಕೂಡ ಯುವಕರು ಹುಚ್ಚಾಟ ಮೆರೆದಿದ್ದಾರೆ. ಎಲ್ಲರೂ ನಶೆಯಲ್ಲಿದ್ದರು ಎಂಬ ಆರೋಪ ಕೇಳಿ ಬಂದಿದೆ.
Last Updated : Feb 3, 2023, 8:21 PM IST