ಬಂಟ್ವಾಳ: ಚಲಿಸುತ್ತಿರುವ ಕಾರಿಗೆ ದಿಢೀರ್ ಬೆಂಕಿ.. ಕಾರು ಸುಟ್ಟು ಭಸ್ಮ
🎬 Watch Now: Feature Video
ಬಂಟ್ವಾಳ: ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೋಡಪದವು ಸರವು ಎಂಬಲ್ಲಿ ನಡೆದಿದೆ. ಕೆಲಿಂಜ ನಿವಾಸಿ ಸಿಟ್ರೀನ್ ಪಾಯಸ್ ಅವರಿಗೆ ಸೇರಿದ ಕಾರು ಸಂಪೂರ್ಣವಾಗಿ ಸುಟ್ಟು ಕರಲಾಗಿದೆ. ಇವರು ಬೋಳಂತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಕೇಳಿಸಿದ್ದು. ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Last Updated : Feb 3, 2023, 8:19 PM IST