ನೋಡಿ: ಮಣಭಾರದ ಟ್ರ್ಯಾಕ್ಟರ್ ಮೇಲಕ್ಕೆತ್ತಿ, ಮೈಮೇಲೂ ಹರಿಸಿ ಬೆರಗುಗೊಳಿಸಿದ ಕುಸ್ತಿಪಟು - maghi purnima fair in khagaria
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14489882-thumbnail-3x2-lek.jpg)
ಬಿಹಾರ: ಪಂಜಾಬ್ ಮೂಲದ ಈ ಕುಸ್ತಿಪಟುವಿನ ಸಾಹಸಗಳನ್ನು ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡುವುದಂತೂ ಗ್ಯಾರಂಟಿ. ಕುಸ್ತಿಪಟು ಕರ್ನಲ್ ಸಿಂಗ್ ಅವರು ಖಗರಿಯಾ ಜಿಲ್ಲೆಯ ಗಂಗಾ ನದಿ ದಡದಲ್ಲಿ ಮಾಘಿ ಪೂರ್ಣಿಮೆ ಹಿನ್ನೆಲೆಯಲ್ಲಿ ಸ್ನಾನ ಮಾಡಲು ಬಂದಿದ್ದ ಸಾವಿರಾರು ಜನರಿಗೆ ತಮ್ಮ ಬಾಹುಗಳ ಶಕ್ತಿ ಪ್ರದರ್ಶಿಸಿ ಬೆರಗುಗೊಳಿಸಿದರು. ಕರ್ನಲ್ ಸಿಂಗ್ ಮೊದಲು ಭಾರವಾದ ಟ್ರ್ಯಾಕ್ಟರ್ ಅನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿದರು. ನಂತರ ಟ್ರ್ಯಾಕ್ಟರ್‌ನ ಕೆಳಗೆ ಮಲಗಿದ್ದು, ವಾಹನದ ಎರಡು ಚಕ್ರಗಳು ಮೈಮೇಲೆ ಚಲಿಸಿದ್ರೂ ಕೂಡ ಅವರು ಒಂಚೂರೂ ಕದಲಲಿಲ್ಲ. ಕೊನೆಗೆ ಕತ್ತಿನಿಂದ ಟ್ರ್ಯಾಕ್ಟರ್ ಎಳೆದುಕೊಂಡು ಹೋಗುವ ಮೂಲಕವೂ ಸಾರ್ವಜನಿಕರಿಂದ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡರು.
Last Updated : Feb 3, 2023, 8:16 PM IST