ನಯಾಗರ ಜಲಪಾತದ ಬಳಿ ‘ಆಜಾದಿ ಕಾ ಅಮೃತ್ ಮಹೋತ್ಸವ’ ನಿಮಿತ್ತ ಯೋಗ ದಿನ - ನಯಾಗರಾ ಜಲಪಾತದ ಬಳಿ ವಿಶ್ವ ಯೋಗಾ ದಿನಾಚರಣೆ
🎬 Watch Now: Feature Video
ನ್ಯೂಯಾರ್ಕ್: 2022 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಡಿ ಅಮೆರಿಕದಲ್ಲಿ ನಡೀತು. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ, ಬಫಲೋ - ನಯಾಗರ ತಮಿಳು ಮಂಡ್ರಮ್ ಮತ್ತು ಇಂಡಿಯಾ ಅಸೋಸಿಯೇಷನ್ ಆಫ್ ಬಫಲೋ ಅವರ ಬೆಂಬಲದೊಂದಿಗೆ ಐಕಾನಿಕ್ ನಯಾಗರ ಜಲಪಾತದಲ್ಲಿ ಯೋಗ ದಿನಾಚರಣೆಗಳನ್ನು ಜೂನ್ 19 ರಂದು ನಡೆಸಲಾಯಿತು. ಈ ಕಾರ್ಯಕ್ರಮ ನಯಾಗರ ಫಾಲ್ಸ್ ಸ್ಟೇಟ್ ಪಾರ್ಕ್‌ನ ಗೋಟ್ ಐಲ್ಯಾಂಡ್‌ನಲ್ಲಿ ನಡೆಯಿತು. ಇಲ್ಲಿಂದ ಜಲಪಾತವನ್ನು ನೇರವಾಗಿ ನೋಡಬಹುದಾಗಿದೆ. ಸುಮಾರು 150 ಯೋಗ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದೇ ಮೊದಲ ಬಾರಿಗೆ ನಯಾಗರ ಜಲಪಾತದಲ್ಲಿ ಯೋಗ ಅಂತಾರಾಷ್ಟ್ರೀಯ ದಿನಾಚರಣೆ ಕೈಗೊಳ್ಳಲಾಯಿತು.
Last Updated : Feb 3, 2023, 8:24 PM IST