ಬೈಕ್ ಸ್ಟಂಟ್ ಮಾಡಲು ಹೋಗಿ ಹಾರಿ ಬಿದ್ದ ಸವಾರರು.. ವಿಡಿಯೋ ವೈರಲ್ - Royal enfield skid
🎬 Watch Now: Feature Video
ವಿಜಯನಗರ : ಬೈಕ್ ಸ್ಟಂಟ್ ಮಾಡಲು ಹೋಗಿ ಬೈಕ್ ಸವಾರರಿಬ್ಬರು ಹಾರಿ ಬಿದ್ದ ಘಟನೆ ಹೊಸಪೇಟೆಯ ಚಿತ್ತವಾಡಿಗಿಯ ಗೃಹ ರಕ್ಷಕ ದಳದ ಕಚೇರಿ ಬಳಿಯ ಬೈಪಾಸ್ನಲ್ಲಿ ನಡೆದಿದೆ. ರಾಯಲ್ ಎನ್ಫೀಲ್ಡ್ ಬೈಕ್ ಚಲಾಯಿಸುತ್ತಿದ್ದ ಬೈಕ್ ಸವಾರರು ಹಾರಿಬಿದ್ದಿದ್ದಾರೆ.
ಸ್ಪೀಡಾಗಿ ಡ್ರೈವ್ ಮಾಡುತ್ತ ಬೈಕ್ ಸ್ಟಂಟ್ ಮಾಡಲು ಹೋದ ಬೈಕ್ ಸವಾರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಅತಿ ವೇಗದಲ್ಲಿ ಇದ್ದಿದ್ದರಿಂದಾಗಿ ನಿಯಂತ್ರಣಕ್ಕೆ ಸಿಗದೆ ಅಪಘಾತ ಆಗಿದೆ. ರಾಯಲ್ ಎನ್ಫೀಲ್ಡ್ ಅನ್ನು ಸ್ಪೀಡ್ ಆಗಿ ಡ್ರೈವಿಂಗ್ ಮಾಡುವುದನ್ನು ಮತ್ತೊಬ್ಬ ಬೈಕ್ ಸವಾರ ವಿಡಿಯೋ ಮಾಡಿದ್ದು, ಅಪಘಾತದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ವಿರುಪಾಕ್ಷ ಹಾಗೂ ಮಲ್ಲಿಕಾರ್ಜುನ ಬೈಕ್ನಿಂದ ಹಾರಿಬಿದ್ದ ಸವಾರರು. ಇಬ್ಬರು ಸವಾರರಿಗೆ ಕಾಲು, ತಲೆಗೆ ಗಂಭೀರ ಗಾಯ ಆಗಿದೆ. ಅಪಘಾತಕ್ಕೀಡಾದ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ..