ಗಣರಾಜ್ಯೋತ್ಸವದಂದೇ 17 ಪಾಕಿಸ್ತಾನಿ ಕೈದಿಗಳ ಬಿಡುಗಡೆ - pakistani prisoners released
🎬 Watch Now: Feature Video
ಅಮೃತಸರ (ಪಂಜಾಬ್): 74ನೇ ಗಣರಾಜ್ಯೋತ್ಸವದಂದು ಭಾರತ ಸರ್ಕಾರ ಪಾಕಿಸ್ತಾನದ 17 ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮ ಉದಾರತೆ ತೋರಿದೆ. ಇದರಲ್ಲಿ 12 ಜನ ಪಾಕಿಸ್ತಾನದ ಮೀನುಗಾರರು ಮತ್ತು 5 ಜನ ನಾಗರಿಕ ಕೈದಿಗಳನ್ನು ಬಿಡುಗಡೆ ಮಾಡಿ ತಾಯ್ನಾಡಿಗೆ ಕಳುಹಿಸಿದೆ. 2013ರಲ್ಲಿ ಕರಾಚಿಯಿಂದ ಬಂದಂತಹ 3 ಜನ ಮೀನುಗಾರರು ಗಡಿ ದಾಟಿ ಭಾರತವನ್ನ ಪ್ರವೇಶ ಮಾಡಿ ಮೀನುಗಾರಿಕೆ ಮಾಡುವ ವೇಳೆ ಗುಜರಾತ್ನಲ್ಲಿ ಬಂಧಿಸಲಾಗಿತ್ತು.
ಇವರಿಗೆ 10ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿತ್ತು. ಇನ್ನು 2017ರಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರತದ ಗಡಿ ದಾಟಿ ಬಂದಿದ್ದ 9 ಜನ ಪಾಕಿಸ್ತಾನಿ ಮೀನುಗಾರರನ್ನು ಗುಜರಾತ್‌ನ ಕಚ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಅವರಿಗೆ 6 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಇನ್ನುಳಿದಂತೆ ಐವರು ಭಾರತದ ಗಡಿ ಪ್ರವೇಶಿಸುವಾಗ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು. ಇನ್ನು ಎಲ್ಲ ಕೈದಿಗಳ ಶಿಕ್ಷೆ ಪೂರ್ಣಗೊಂಡ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಂಡ ಕೈದಿಗಳು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಕಳ್ಳತನ ಮಾಡಲು ಗಣಿಗೆ ಇಳಿದ ನಾಲ್ವರು: ಉಸಿರುಗಟ್ಟಿ ಸಾವು