ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಅಕ್ಷಯ್ ಕುಮಾರ್ ಭೇಟಿ, ದರ್ಶನ - saibaba
🎬 Watch Now: Feature Video
ಶಿರಡಿ(ಮಹಾರಾಷ್ಟ್ರ): ಭಾರತದಲ್ಲಿ ಅತಿ ಹೆಚ್ಚು ಜನ ಪೂಜಿಸಲ್ಪಡುವ ಏಕೈಕ ಸಂತ ಎಂದರೆ ಶಿರಡಿ ಸಾಯಿಬಾಬಾ, ಬಾಲಿವುಡ್ನ ಖ್ಯಾತ ನಟ ಅಕ್ಷಯ ಕುಮಾರ್ ಬುಧವಾರ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ, ಸಾಯಿಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜಾಧವ್ ಅವರು ಅಕ್ಷಯ್ ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಸಾಯಿಬಾಬಾ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಂದಿರಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಬಂದಿದ್ದಾರೆ ಎಂದು ತಿಳಿದ ಇತರ ಭಕ್ತಾಧಿಗಳು ನಟನನ್ನು ಕಂಡು ಸಂತೋಷ ಪಟ್ಟರು. ಇನ್ನು ಕೆಲವರು ಅವರನ್ನು ಕೈಕುಲಿಕಿ ಮಾತನಾಡಿಸಲು ಮುಂದಾದರು. ಶಿರಡಿ ಸಾಯಿಬಾಬಾ ದರ್ಶನಕ್ಕೆ ಇಂದು ಅಕ್ಷಯ್ ಕುಮಾರ್ ಅವರು ಶಿರಡಿಗೆ ಆಗಮಿಸುತ್ತಿದ್ದಾರೆ ಎಂದ ತಿಳಿದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಜಮಾಯಿಸಿದ್ದರು.
ಇದನ್ನೂ ಓದಿ: ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ..