Video.. ಡೊಳ್ಳು ಬಾರಿಸಿ ಮಕ್ಕಳ ಜೊತೆ ಹೆಜ್ಜೆ ಹಾಕಿದ ಮಧು ಬಂಗಾರಪ್ಪ - ಮಧು ಬಂಗಾರಪ್ಪ ದಂಪತಿ
🎬 Watch Now: Feature Video
ಸೊರಬ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ಶ್ರೀ ದ್ಯಾಮವ್ವ ದೇವಿ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಇಂದು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ದೇವಿಗೆ ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥ ಎಳೆದು, ಡೊಳ್ಳು ಕಟ್ಟಿ ಹೆಜ್ಜೆ ಹಾಕಿದ್ದು ನೋಡುಗರ ಗಮನ ಸೆಳೆಯಿತು.
ಮಧು ಬಂಗಾರಪ್ಪ ದಂಪತಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಜಾತ್ರಾ ಮಹೋತ್ಸವದಲ್ಲಿ ಕುಚಿಕು - ಕುಚಿಕು ಹಾಡಿಗೆ ಮಧು ಬಂಗಾರಪ್ಪ ಹಾಗೂ ಅವರ ಪತ್ನಿ ಮಕ್ಕಳೊಂದಿಗೆ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಒಟ್ಟಾರೆ ಗ್ರಾಮ ದೇವಿ ಜಾತ್ರಾ ಮಹೋತ್ಸವದಲ್ಲಿ ಕುಟುಂಬಸ್ಥರೊಂದಿಗೆ ದೇವಿಗೆ ಭಕ್ತಿ ಸಮರ್ಪಿಸಿ ಮಕ್ಕಳೊಂದಿಗೆ ಮಧು ಬಂಗಾರಪ್ಪ ಮಕ್ಕಳಂತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಇದನ್ನೂ ನೋಡಿ: ಮಾಜಿ ಸಚಿವ ಎಂ ಬಿ ಪಾಟೀಲ್ ಪರ ಪ್ರಚಾರಕ್ಕೆ ಪುತ್ರನ ಸಿದ್ಧತೆ: ಎಲ್ಇಡಿ ಪರದೆಯಲ್ಲಿ ವಿಡಿಯೋ ಡಾಕ್ಯುಮೆಂಟರಿ ಪ್ರದರ್ಶನ