ಮಂಡ್ಯ: ಜಮೀನಿನಲ್ಲಿ ಸಿಕ್ಕ ಎರಡು ಚಿರತೆ ಮರಿಗಳ ರಕ್ಷಣೆ - ಕೂಳಗೆರೆ ಗ್ರಾಮಸ್ಥರು
🎬 Watch Now: Feature Video
ಮಂಡ್ಯ: ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದ ಜಮೀನಿನಲ್ಲಿ 2 ಚಿರತೆ ಮರಿಗಳು ಪತ್ತೆಯಾಗಿದ್ದು ಮಕ್ಕಳು ಕೋಳಿ ಗೂಡಿನಲ್ಲಿ ತಂದು ಕೂಡಿ ಹಾಕಿದ್ದರು. ತಾಯಿ ಚಿರತೆ ಬೇಟೆಗೆ ಹೋದಾಗ ಮರಿಗಳು ಜಮೀನಿನಲ್ಲಿ ತಿರುಗುತ್ತಿದ್ದವು. ಚಿರತೆ ಮರಿಗಳನ್ನು ನೋಡಲು ಕೂಳಗೆರೆ ಗ್ರಾಮಸ್ಥರು ಆಗಮಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮರಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಎದುರಾಗಿದೆ. ಸೆರೆ ಹಿಡಿಯಲು ಬೋನು ಇಡಲಾಗಿದೆ.
ಇದನ್ನೂ ಓದಿ: ಮೈಸೂರು: ಕಾಡು ಬಿಟ್ಟು ನಾಡಿಗಿಳಿದ ಆನೆಗಳ ದಂಡು; ರೈತರ ಆತಂಕ
Last Updated : Feb 14, 2023, 11:34 AM IST