ಕಬಡ್ಡಿ..ಕಬಡ್ಡಿ.. ಎನ್ನುತ್ತ ರೈಡ್ ಮಾಡುವಾಗಲೇ ಉಸಿರು ನಿಲ್ಲಿಸಿದ ಆಟಗಾರ - ವಿಡಿಯೋ - etvbharatkannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15921325-thumbnail-3x2-nin.jpg)
ಕಡಲೂರು(ತಮಿಳುನಾಡು): ಕಬಡ್ಡಿ ಆಟಗಾರ ವಿಮಲ್ (26) ಅವರು ಆಟ ಆಡುವ ವೇಳೆಯೇ ಸಾವಿಗೀಡಾಗಿದ್ದಾರೆ. ಕಡಲೂರು ಜಿಲ್ಲೆಯ ಪಂರುತಿ ಸಮೀಪದ ಕಟಾಂಬುಲಿಯೂರಿನ ಪುರಾಂಗಣಿ ಗ್ರಾಮದವರು. ಭಾನುವಾರ ಮನಾಡಿಕುಪ್ಪಂ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸಲಾಗಿತ್ತು. ಅದರಲ್ಲಿ ವಿಮಲ್ ತಂಡ ಎದುರಾಳಿ ತಂಡದ ವಿರುದ್ಧ ಆಡುತ್ತಿದ್ದಾಗ ರೈಡರ್ ವಿಮಲ್ ಆಟಗಾರನೊಬ್ಬನನ್ನು ಔಟ್ ಮಾಡಿ ಜಿಗಿಯುವ ಮೂಲಕ ಟಚ್ ಲೈನ್ ದಾಟಲು ಹಿಂದಕ್ಕೆ ಬರಲು ಯತ್ನಿಸಿದರು. ಜೊತೆಗೆ ಎರಡು ಅಂಕಗಳನ್ನೂ ಗಳಿಸಿದರು. ಆದರೆ, ಕೆಲವೇ ಸೆಕೆಂಡುಗಳಲ್ಲಿ ಅವರು ಪ್ರಜ್ಞೆ ತಪ್ಪಿಬಿದ್ದರು. ತಕ್ಷಣ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ವಿಮಲ್ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆಟದ ಮೈದಾನದಲ್ಲಿಯೇ ಕ್ರೀಡಾ ಪಟುಯೊಬ್ಬರು ಸಾವಿಗೀಡಾಗಿದ್ದರಿಂದ ಈ ಭಾಗದಲ್ಲಿ ನೀರಸ ಮೌನ ಆವರಿಸಿದೆ. ಘಟನೆ ಸಂಬಂಧ ಕಾಟಾಂಪಲಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
Last Updated : Feb 3, 2023, 8:25 PM IST