ವಿಡಿಯೋ ನೋಡಿ... ಅಜ್ಮೀರ್​​ನ ಸಂತ ಖ್ವಾಜಾ ಗರೀಬ್ ದರ್ಗಾಕ್ಕೆ ರೆಡ್ಡಿ ಭೇಟಿ.! - Khwaja Garib Nawaz dargah in Ajmer

🎬 Watch Now: Feature Video

thumbnail

By

Published : Jan 23, 2023, 5:25 PM IST

Updated : Feb 3, 2023, 8:39 PM IST

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ದರ್ಗಾಗಳಿಗೆ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಪಕ್ಷದ ನಾಯಕರ ನಿದ್ದೆಗೆಡಿಸಿದೆ‌. ಇಂದು ಜನಾರ್ದನ ರೆಡ್ಡಿ ಪತ್ನಿ ಸಮೇತ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಅಜ್ಮೀರ್​ನಲ್ಲಿನ ಖಾಜಾ ಗರೀಬ್ ನವಾಜ್ ದರ್ಗಾಕ್ಕೆ ತೆರಳಿ ಚಾದರ ಮತ್ತು ಹೂ ಸಮರ್ಪಣೆ ಮಾಡಿ, ವಿವಿಧ ಧಾರ್ಮಿಕ ವಿಧಿ - ವಿಧಾನ ಪೂರೈಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿರೋ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ, ನಾಡಿನ ಜನರ ನೆಮ್ಮದಿಯ ಜೀವನಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.‌ ಇದರಿಂದಾಗಿ ರೆಡ್ಡಿ ದಿನದಿಂದ ದಿನಕ್ಕೆ ತಮ್ಮ ಕಾರ್ಯ ವೈಖರಿಯಿಂದಾಗಿ ಕಾಂಗ್ರೆಸ್ ಪಾಳೆಯದಲ್ಲಿ ಆತಂಕ ಹೆಚ್ಚಿಸಿದ್ದಾರೆ.

ಸೂಫಿ ಸಂತರ ನೆಲವೀಡಾದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ವಿಶೇಷ ಕಾರ್ಯಗಳನ್ನು ಕೈಗೆತ್ತಿಕೊಂಡಾಗ ದೇವಸ್ಥಾನ, ದರ್ಗಾಗಳಿಗೆ ತೆರಳಿ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಅದರಂತೆ ದೇಶದಲ್ಲೆ ಹೆಸರಾದ ಅಜ್ಮೇರಿ ದರ್ಗಾಕ್ಕೆ ಜನಾರ್ದನರೆಡ್ಡಿ ದಂಪತಿಗಳು ಕೂಡಾ ಭೇಟಿ ನೀಡಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಕಣ್ಣೀರ ಕತೆ 12 ವರ್ಷದ ಹಿಂದೆಯೇ ಮುಗಿದು ಹೋಗಿದೆ: ಜನಾರ್ದನ ರೆಡ್ಡಿ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.