ಆರ್ಥಿಕ ಸಶಕ್ತ ದೇಶ ಕಟ್ಟುವೆ, ಮಾತಲ್ಲಿ ಅಲ್ಲ ಮಾಡಿ ತೋರಿಸುವೆ: ರಿಷಿ ಸುನಕ್ ಭರವಸೆ - ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾಷಣ
🎬 Watch Now: Feature Video

ಆರ್ಥಿಕ ಸವಾಲು ಎದುರಿಸುತ್ತಿರುವ ಇಂಗ್ಲೆಂಡ್ ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ಹಗಲಿರುಳು ಶ್ರಮಿಸುವುದಾಗಿ ಹೇಳಿದ ರಿಷಿ ಸುನಕ್, ದೇಶದ ಜನರ ನಂಬಿಕೆಯನ್ನು ಉಳಿಸಿಕೊಳ್ಳುವೆ. ಇದನ್ನು ಮಾತಲ್ಲಿ ಅಲ್ಲ, ಕೃತಿಯಲ್ಲಿ ಮಾಡಿ ತೋರಿಸುತ್ತೇನೆ ಎಂಬ ಭರವಸೆಯ ಮಾತನ್ನಾಡಿದರು. ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಭಾಷಣ ಮಾಡಿದ ಅವರು, ದೇಶದ ಗಡಿ ರಕ್ಷಣೆ, ಉತ್ತಮ ಶಾಲೆಗಳ ನಿರ್ಮಾಣ, ಸುರಕ್ಷಿತ ರಸ್ತೆಗಳು, ಸಶಸ್ತ್ರ ಪಡೆಗಳ ಬಲ ಹೆಚ್ಚಳ ಮಾಡುವುದಕ್ಕೆ ಆದ್ಯತೆ ನೀಡುವೆ. ದೇಶವನ್ನು ಆರ್ಥಿಕವಾಗಿ ಬಲಪಡಿಸುವೆ ಎಂದರು. ಇನ್ನೊಂದೆಡೆ, ಅಧಿಕಾರ ಸ್ವೀಕಾರದ ಬಳಿಕ ಕೆಲ ಸಚಿವರನ್ನು ಪದಚ್ಯುತಿಗೊಳಿಸಿ ಅಚ್ಚರಿ ಮೂಡಿಸಿದ್ದಾರೆ.
Last Updated : Feb 3, 2023, 8:30 PM IST