ಚಾಲಕನ ಅನುಚಿತ ವರ್ತನೆ: ಚಲಿಸುತ್ತಿದ್ದ ಆಟೋದಿಂದ ಜಿಗಿದ ಯುವತಿ.. ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್

🎬 Watch Now: Feature Video

thumbnail

By

Published : Nov 16, 2022, 8:29 PM IST

Updated : Feb 3, 2023, 8:32 PM IST

ಔರಂಗಾಬಾದ್ (ಮಹಾರಾಷ್ಟ್ರ): ಚಾಲಕ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಯುವತಿಯೊಬ್ಬಳು ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಹೊರಗೆ ಜಿಗಿದಿರುವ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ. ಇದರಿಂದ ಯುವತಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಇನ್ಸ್‌ಪೆಕ್ಟರ್ ಗಣಪತ್ ದಾರಾಡೆ ಮಾತನಾಡಿ, ನವೆಂಬರ್ 13ರಂದು ಯುವತಿಯು ತನ್ನ ನೀಟ್ ಕೋಚಿಂಗ್ ತರಗತಿಯಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವಳನ್ನು ಕರೆದುಕೊಂಡು ಹೋಗಲು ಸಾಮಾನ್ಯವಾಗಿ ತಂದೆ ಅಥವಾ ಸಹೋದರ ಬರುತ್ತಿದ್ದರು. ಆದರೆ ಅಂದು ಅವರು ಬಾರದ ಕಾರಣ ಯುವತಿ ಆಟೋದಲ್ಲಿ ಬಂದಿದ್ದಾಳೆ. ಆಟೋ ಚಾಲಕನ ಅನುಚಿತ ವರ್ತನೆಯಿಂದ ಭಯಗೊಂಡು ಹೊರಗಡೆ ಜಿಗಿದಿದ್ದಾಳೆ ಎಂದು ಹೇಳಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಆರೋಪಿ ಸೈಯದ್​ ಅಕ್ಬರ್​ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated : Feb 3, 2023, 8:32 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.