ಧ್ವಜ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟ ಅಗ್ನಿಶಾಮಕ ಸಿಬ್ಬಂದಿ: ದೇಶಪ್ರೇಮಕ್ಕೆ ತಲೆ ಬಾಗಿದ ಜನ

🎬 Watch Now: Feature Video

thumbnail

By

Published : Jan 18, 2023, 10:25 PM IST

Updated : Feb 3, 2023, 8:39 PM IST

ಪಾಣಿಪತ್(ಹರಿಯಾಣ): ಇಲ್ಲಿನ ಸ್ಪಿನ್ನಿಂಗ್ ಮಿಲ್ ಮಂಗಳವಾರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಅಗ್ನಿಶಾಮಕ ದಳ ಸಿಬ್ಬಂದಿಗೆ ಹತ್ತಿರ ಹೋಗಿ ಬೆಂಕಿ ನಂದಿಸುವುದು ಹರ ಸಾಹಸವಾಗಿತ್ತು. ಬೆಂಕಿ ಬಿರುಸಿಗೆ ಕ್ಷಣಮಾತ್ರದಲ್ಲೇ ಇಡೀ ಗಿರಣಿ ಸುಟ್ಟು ಬೂದಿಯಾಯಿತು. ರಸ್ತೆ ಇಕ್ಕಟ್ಟಾಗಿರುವುದರಿಂದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಲು ಸಾಕಷ್ಟು ತೊಂದರೆ ಅನುಭವಿಸ ಬೆಕಾಯಿತು.

ಅಗ್ನಿಶಾಮಕ ವಾಹನಗಳು ಸಾಕಷ್ಟು ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣ ಮಾಡಿತಾದರೂ ಗಿರಣಿ ಬಹುತೇಕ ಸುಟ್ಟು ಕರಕಲಾಗಿತ್ತು. ಈ ಅವಘಡದ ಸಂದರ್ಭದಲ್ಲಿ ಗಿರಣಿ ಮೇಲೆ ಹಾರಿಸಿದ್ದ ಧ್ವಜ ಕಂಡ ಅಗ್ನಿಶಾಮಕದಳ ಸಿಬ್ಬಂದಿ ಒಬ್ಬ ರಕ್ಷಣೆ ಮಾಡಿದ್ದಾರೆ. ಬೆಂಕಿಯ ಉರಿಯನ್ನೂ ಲೆಕ್ಕಿಸದೇ ಧ್ವಜ ರಕ್ಷಣೆ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದು, ಆತನ ದೇಶ ಪ್ರೇಮಕ್ಕೆ ಎಲ್ಲರೂ ತಲೆ ಬಾಗುತ್ತಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿದ ಫೈರ್‌ಮ್ಯಾನ್ ಸುನಿಲ್, 'ಪೊಲೀಸ್ ಮತ್ತು ಸೇನಾ ಸಿಬ್ಬಂದಿಯಂತೆ ನಾವು ಜನರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತೇವೆ. ನಾನು ಯಾವಾಗಲೂ ಆ ಪ್ರತಿಜ್ಞೆ ಪೂರೈಸಲು ಪ್ರಯತ್ನಿಸುತ್ತೇನೆ. ತ್ರಿವರ್ಣ ಧ್ವಜವೇ ದೇಶದ ಗೌರವ. ಈ ತ್ರಿವರ್ಣ ಧ್ವಜಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡುವ ಧೈರ್ಯ ನನಗಿದೆ. ಈ ಉತ್ಸಾಹದಿಂದ ನಾನು ಕಟ್ಟಡವನ್ನು ಹತ್ತಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಕೆಳಗೆ ತಂದಿದ್ದೇನೆ' ಎಂದಿದ್ದಾರೆ.  

ಇದನ್ನೂ ಓದಿ: ಗುಡಿಸಲಿಗೆ ಬೆಂಕಿ ತಗುಲಿ ಅಪ್ಪ - ಮಗಳು ಸಜೀವ ದಹನ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.