ಕಲಿತ ಕಾಲೇಜಿನಲ್ಲಿ ಧರ್ಮ ಮೀರಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ- ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಎರ್ನಾಕುಲಂ(ಕೇರಳ): ಪ್ರೇಮಿಗಳಿಬ್ಬರು ತಾವು ಕಲಿತ ಕಾಲೇಜಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇಂಥದ್ದೊಂದು ವಿಶೇಷ ವಿವಾಹಕ್ಕೆ ಎರ್ನಾಕುಲಂ ಮಹಾರಾಜ ಕಾಲೇಜು ಸಾಕ್ಷಿಯಾಯಿತು. ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕಲಾ ಉತ್ಸವದ ಮಧ್ಯೆ ಸ್ನೇಹಿತರು ತಯಾರಿಸಿದ ಹೂವಿನ ಹಾರ ಬದಲಾಯಿಸಿಕೊಂಡು ಪ್ರೇಮಿಗಳು ಮದುವೆಯಾದರು. ಉತ್ಸವದಲ್ಲಿ ನೆರೆದಿದ್ದ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿವಾಹ ನೆರವೇರಿತು. ನವದಂಪತಿ ಕೇಕ್ ಕಟ್ ಮಾಡಿ, ಸಿಹಿ ಹಂಚಿ, ಫೋಟೋಗಳಿಗೆ ಫೋಸ್ ಕೊಟ್ಟರು.
ಮಟ್ಟಂಚೇರಿ ಮೂಲದ ಕೆ.ಕೆ.ನದೀಮ್ 2014-2017ರ ಅವಧಿಯಲ್ಲಿ ಬಿಎಸ್ಸಿ ಭೌತಶಾಸ್ತ್ರ ಪದವಿ ವಿದ್ಯಾರ್ಥಿಯಾಗಿದ್ದರು. ಇದೇ ಸಮಯದಲ್ಲಿ ಪಣಂಗಾಡ್ ಮೂಲದ ಸಿ.ಆರ್.ಕೃಪಾ ಬಿಎ ತತ್ವಶಾಸ್ತ್ರ ಪದವಿಯ ವಿದ್ಯಾರ್ಥಿನಿಯಾಗಿದ್ದರು. ಕಾಲೇಜಿನಿಂದಲೂ ಇಬ್ಬರು ಆತ್ಮೀಯ ಗೆಳೆಯರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಕಾಲೇಜು ಬಿಟ್ಟರೂ ಇವರ ಸ್ನೇಹ ಹಾಗೆಯೇ ಮುಂದುವರೆದಿತ್ತು. ಇದು ಅಂತಿಮವಾಗಿ ಪ್ರೇಮಕ್ಕೆ ತಿರುಗಿದ್ದು, ಒಟ್ಟಿಗೆ ಬಾಳುವ ನಿರ್ಧಾರ ತೆಗೆದುಕೊಂಡಿದ್ದರು.
ಇಬ್ಬರು ಬೇರೆ ಬೇರೆ ಸಮುದಾಯದವರಾಗಿದ್ದು, ಕುಟುಂಬಸ್ಥರು ಇವರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರೆ ಇಬ್ಬರಿಗೂ ಬೇರೆಯಾಗಲು ಕಿಂಚಿತ್ತೂ ಇಷ್ಟವಿರಲಿಲ್ಲ. ಅದಕ್ಕಾಗಿಯೇ ವಿರೋಧಗಳ ನಡುವೆಯೂ ಒಂದಾಗಲು ನಿರ್ಧರಿಸಿದ್ದರು. ವಿಶ್ವವಿದ್ಯಾಲಯ ಕಲಾ ಉತ್ಸವವನ್ನು ತಮ್ಮ ಕಾಲೇಜಿನಲ್ಲಿ ಆಯೋಜಿಸಿದ ದಿನವೇ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿಗೆ ದಿನಾಂಕ ಸಿಕ್ಕಿದ್ದು ಕಾಕತಾಳೀಯ ಎಂದು ಕೃಪಾ ಮತ್ತು ನದೀಮ್ ಹೇಳಿದರು.
ಇದನ್ನೂ ಓದಿ: ಆನಂದ್ ಮಹೀಂದ್ರಾ ಅವರಿಂದ 75 ಲಕ್ಷ ಮೌಲ್ಯದ ಎಕ್ಸ್ ರೇ ಯಂತ್ರ ಕೊಡುಗೆ