ಸಾಹುಕಾರ್ನಾದರು ಇಟ್ಟುಕೊಳ್ಳಲಿ, ಸಾವರ್ಕರ್ನಾದರೂ ಇಟ್ಟುಕೊಳ್ಳಲಿ: ಕಟೀಲ್ ವಿರುದ್ಧ ಡಿಕೆಶಿ ವಾಗ್ದಾಳಿ - ಟಿಪ್ಪು ಹಾಗೂ ಸಾವರ್ಕರ್ ನಡುವಿನ ಎಲೆಕ್ಷನ್
🎬 Watch Now: Feature Video
ಬೆಂಗಳೂರು: ಅವರು ಸಾಹುಕಾರ್ನನ್ನಾದರು ಇಟ್ಟುಕೊಳ್ಳಲಿ, ಸಾವರ್ಕರ್ರನ್ನಾದರೂ ಇಟ್ಟುಕೊಳ್ಳಲಿ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ವಿಧಾನಸೌಧಲ್ಲಿ ಮಾತನಾಡಿದ ಅವರು, ಕಟೀಲ್ಗೆ ಸರ್ಕಾರದ ಸಾಧನೆ ವಿಚಾರ ಏನಿಲ್ಲ. ಅದಕ್ಕೆ ಟಿಪ್ಪು, ಸಾರ್ವಕರ್ ಅಂತಿದ್ದಾರೆ. ನಾವು ಜನರ ಬದುಕಿನ ಬಗ್ಗೆ ಮಾತಾನಾಡುತ್ತೇವೆ. ಟಿಪ್ಪು ಹಾಗೂ ಸಾವರ್ಕರ್ ನಡುವಿನ ಎಲೆಕ್ಷನ್ ಎಂಬ ನಳಿನ್ ಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಕಟೀಲ್ ಅವರು ಎಷ್ಟು ಹತಾಶೆ ಆಗಿದ್ದಾರೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಾ ಎಂದು ಪ್ರಶ್ನಿಸಿದರು.
ಬದುಕು ಮತ್ತು ಭಾವನೆ ಎಂದು ನಾವು ಮೊದಲೇ ಹೇಳಿದ್ದೇವೆ. ನಾವು ಭ್ರಷ್ಟಾಚಾರ, ಉದ್ಯೋಗ, ಶಾಂತಿ ಬಗ್ಗೆ ಮಾತಾಡುತ್ತಿದ್ದೇವೆ. ಕಟೀಲ್ ಅವರಿಗೆ ಅವರ ಸರ್ಕಾರದ ಸಾಧನೆ ಹೇಳಲು ಆಗುತ್ತಿಲ್ಲ. ಯಾರಾದರೂ ಫೋಟೋ ಇಟ್ಟಕೊಂಡು ಎಲೆಕ್ಷನ್ ಮಾಡಿಕೊಳ್ಳಲಿ ಎಂದು ಡಿಕೆಶಿ ಟಾಂಗ್ ಕೊಟ್ಟರು. ಮುಂದೆ ಹೆಚ್ ಡಿ ಕೆ ಬ್ರಾಹ್ಮಣ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದು ಅವರ ಪಾರ್ಟಿ ವಿಚಾರ. ಕುಮಾರಸ್ವಾಮಿ ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಮ್ಮದು ಸಾಮೂಹಿಕ ನಾಯಕತ್ವ. ಅವರ ಪಾರ್ಟಿ ಬಗ್ಗೆ ನಾನು ಮಾತನಾಡಲ್ಲ. ಹಾಗೆ ಎಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಸಂಜೆ ಮಾತಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ದೇವರ ತಲೆಯಿಂದ ಬಲಬದಿಗೆ ಬಿದ್ದ ಪ್ರಸಾದ.. ಕುಮಾರಸ್ವಾಮಿಗೆ ಅದೃಷ್ಟ ಎನ್ನುತ್ತಿದ್ದಾರೆ ಜೆಡಿಎಸ್ ಕಾರ್ಯಕರ್ತರು