ಬನ್ನೇರುಘಟ್ಟದ ಬೂತಾನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ - ETV Bharath Kannada
🎬 Watch Now: Feature Video
ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟದ ಬೂತಾನಹಳ್ಳಿಗೆ ತಡರಾತ್ರಿ ಚಿರತೆ ಬಂದಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿದೆ. ಆದರೆ, ಈ ವರೆಗೆ ಜನ-ಜಾನುವಾರುಗಳಿಗೆ ಉಪಟಳ ನೀಡಿಲ್ಲ. ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ವಲಯದ ಅಂಚಿನಲ್ಲಿರುವ ಬೂತಾನಹಳ್ಳಿಗೆ ಚಿರತೆ, ಕರಡಿ, ಆನೆಗಳು ಬರುವುದು ಸಹಜ. ಸಿಸಿ ಕ್ಯಾಮೆರಾ ಅಳವಡಿಸಿದ ನಂತರ ವನ್ಯಜೀವಿಗಳ ಓಡಾಟ ಖಚಿತವಾಗಿದ್ದು ಜನರಿಗೆ ಗಾಬರಿಯಾಗಿದೆ. ಚಿರತೆಯ ನೆಚ್ಚಿನ ಆಹಾರ ನಾಯಿಯಾದ್ದರಿಂದ ಬೇಟೆಗೆ ಊರಿನೊಳಕ್ಕೆ ನುಗ್ಗುತ್ತಿದೆ.
Last Updated : Feb 3, 2023, 8:35 PM IST