ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ಬೋರ್ಗೆ ವಾಹನ ಡಿಕ್ಕಿ: ಚಾಲಕನ ಹೊಟ್ಟೆಗೆ ಚುಚ್ಚಿದ ಬೋರ್ ಹಿಡಿಕೆ... ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಪ್ರಕಾಶಂ (ಆಂಧ್ರಪ್ರದೇಶ): ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ಪಂಪ್ ಬೋರಿಂಗ್ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೋರ್ನ ಹಿಡಿಕೆ ಚಾಲಕನ ಹೊಟ್ಟೆಯೊಳಗೆ ನುಗ್ಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅತೀ ವೇಗದಿಂದ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಯುವಕ ವಾಹನ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ಬೋರ್ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಹೊಡೆದ ರಭಸಕ್ಕೆ ಬೋರ್ನ ಹಿಡಿಕೆ ಯುವಕನ ಹೊಟ್ಟೆ ಸೀಳಿ ಹೊರಬಂದಿದೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಹೊಟ್ಟೆಯೊಳಗೆ ನುಗ್ಗಿದ್ದ ಬೋರ್ ಹಿಡಿಕೆಯನ್ನು ವೆಲ್ಡಿಂಗ್ ಮಾಡಿ ಕತ್ತರಿಸಲಾಗಿದ್ದು, ಸದ್ಯ ಯವಕನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಒಳ್ಳೆಯದಾಗಲಿ ಎಂದು ದೇವರಿಗೆ ಕೈ ಮುಗಿದು ಕಳ್ಳತನಕ್ಕೆ ಯತ್ನಿಸಿದ್ದ ಖದೀಮ ಅರೆಸ್ಟ್: ಸಿಸಿಟಿವಿಯಲ್ಲಿ ದೃಶ್ಯ ಸೆರೆ