ಬೆಂಕಿಗೆ ದಗ ದಗನೇ ಹೊತ್ತಿ ಉರಿದ ಬಸ್​..42 ಮಂದಿ ಜೀವ ಸೇಫ್ - a state transport bus caught fire in pimpalvihir

🎬 Watch Now: Feature Video

thumbnail

By

Published : Nov 1, 2022, 6:41 PM IST

Updated : Feb 3, 2023, 8:31 PM IST

ಪುಣೆ ನಗರದಲ್ಲಿ ಮಂಗಳವಾರ ರಾಜ್ಯ ಸಾರಿಗೆ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್​ ನಲವತ್ತೆರಡು ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಯರವಾಡ ಏರಿಯಾದ ಶಾಸ್ತ್ರಿ ಚೌಕ್​ನಲ್ಲಿ ಬೆಳಗ್ಗೆ 11:30 ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ. ಯಾವತ್ಮಲ್​​​​​​​ ​ನಿಂದ ಪುಣೆಯೆಡೆಗೆ ಬಸ್​ ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ. ಬಸ್​ನ ಇಂಜಿನ್​ ಭಾಗದಲ್ಲಿ ಹೊಗೆ ಬರುವುದನ್ನು ಚಾಲಕ ಹಾಗೂ ನಿರ್ವಾಹಕರು ಗಮನಿಸಿದ್ದಾರೆ. ಈ ವೇಳೆ, ಪ್ರಯಾಣಿಕರಿಗೆ ತಿಳಿಸಿದ್ದರಿಂದ ಅವರು ಬಚಾವ್ ಆಗಿದ್ದಾರೆ. ಬಸ್​ನಿಂದ ಪ್ರಯಾಣಿಕರು ಇಳಿದ ಕೂಡಲೇ ಬಸ್​ ಬೆಂಕಿಗೆ ಆಹುತಿಯಾಗಿದೆ. ಈ ವೇಳೆ, ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಯಾರೊಬ್ಬರು ಘಟನೆಯಲ್ಲಿ ಗಾಯಗೊಂಡಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
Last Updated : Feb 3, 2023, 8:31 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.