ಅರ್ಧ ಹಾವನ್ನು ನುಂಗಿ ಹೊರ ಹಾಕಿದ ನಾಗ! ವಿಡಿಯೋ.. - ವಿಶಾಖಪಟ್ಟಣಂ ಸುದ್ದಿ
🎬 Watch Now: Feature Video
ಹಾವು ಮತ್ತೊಂದು ಹಾವನ್ನು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ನೌಕಾಪಡೆಯ ಸಿಬ್ಬಂದಿ ಕರ್ತವ್ಯ ಮುಗಿಸಿ ಡಾಲ್ಫಿನ್ ಹಾಲ್‌ಗೆ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಹಾವು ಮತ್ತೊಂದು ಹಾವು ನುಂಗುತ್ತಿರುವುದನ್ನು ಗಮನಿಸಿದ್ದಾರೆ. ಹಾವೊಂದು ಅರ್ಧ ಹಾವನ್ನು ನುಂಗಿದ್ದು, ಬಳಿಕ ಉಗುಳಿದೆ. ಸಾಮಾನ್ಯವಾಗಿ ಒಂದೇ ಜಾತಿಯ ಪ್ರಾಣಿಯನ್ನು ತಿನ್ನುವುದನ್ನು ನರಭಕ್ಷಕ ಎಂದು ಕರೆಯಲಾಗುತ್ತದೆ. ಕೂಡಲೇ ಹಾವು ರಕ್ಷಕ ನಾಗರಾಜುವಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ನಾಗರಾಜ ಸತ್ತ ಹಾಗೂ ಜೀವಂತ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
Last Updated : Feb 3, 2023, 8:23 PM IST