ನಾಗರ ಹಾವಿನೊಂದಿಗೆ ಸೆಲ್ಫಿ ತೆಗದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ....
🎬 Watch Now: Feature Video
ನೆಲ್ಲೂರು (ಆಂಧ್ರಪ್ರದೇಶ): ವಿಷಪೂರಿತ ನಾಗರಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವೇಳೆ ಹಾವು ಕಚ್ಚಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಲ್ಲಿಯ ಮಂಗಳಂಪಾಡು ಎಂಬಲ್ಲಿ ನಡೆದಿದೆ. ಜಗದೀಶ್ (24) ಮೃತ ಯುವಕ. ನಾಗರ ಹಾವನ್ನು ಹೆಗಲ ಮೇಲೆ ಕೂರಿಸಿಕೊಂಡು ಸೆಲ್ಫಿ ತೆಗೆದುಕೊಳ್ಳು ಜಗದೀಶ್ ಮುಂದಾಗಿದ್ದ ವೇಳೆ ಕೈಗೆ ಹಾವು ಕಡಿದಿದೆ. ಕೂಡಲೇ ಜಗದೀಶ್ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದುರಾದೃಷ್ಟವಾಶತ್ ಆಸ್ಪತ್ರೆಯಲ್ಲಿ ಆ್ಯಂಟಿ ವೆನಮ್ (ಹಾವು ಕಡೆದಾಗ ಕೊಡುವ ಮದ್ದು)ಇಲ್ಲದ ಕಾರಣ ಜಗದೀಶ್ ಅಸುನೀಗಿದ್ದಾರೆ.
ಇದನ್ನೂ ಓದಿ: ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು
Last Updated : Feb 3, 2023, 8:39 PM IST